ಯೇರ್, ಬ್ಯಾರನ್ ಜೆರಾಲ್ಡ್ ಜೇಕಬ್ ಡ	1858-1943.  ಸ್ವೀಡನ್ನಿನ ಪ್ರಸಿದ್ಧ ಭೂವಿಜ್ಞಾನಿ.  ಬಾಲ್ಟಿಕ್ ಪ್ರದೇಶದ ಜೇಡು ನಿಕ್ಷೇಪಗಳು ವಾರ್ಷಿಕಸ್ತರಗಳೆಂದೂ ಅವುಗಳೊಡನೆ ನೀರ್ಗಲ್ಲು ನಿಕ್ಷೇಪಗಳ ಸಂಬಂಧವಿದೆಯೆಂದೂ ಆ ಮೂಲಕ ಭೂಮಿಯ ಭೂವೈಜ್ಞಾನಿಕಕಾಲ ನಿರ್ಧಾರ ಮಾಡಬಹುದೆಂದೂ ತನ್ನ ಸಂಶೋಧನೆಗಳ ಮೂಲಕ ತರ್ಕಿಸಿದ್ದಾನೆ. ಶಿಲೆಗಳ ವಯೋನಿರ್ಧಾರದ ಹೊಸತತ್ತ್ವವೊಂದನ್ನು ನಿರೂಪಿಸಿ ಅದನ್ನು ಯುರೋಪ್ಯೇತರ ಖಂಡಗಳಿಗೂ ಅನ್ವಯಿಸಿದ್ದಾನೆ.  ಸ್ವೀಡಿಷ್ ಭೂಕಾಲ ತತ್ತ್ವಗಳು ಎಂಬ ಗ್ರಂಥದಲ್ಲಿ (1940) ಇದಕ್ಕೆ ಸಂಬಂಧಿಸಿದ ವಿವರಗಳನ್ನು ಕೊಟ್ಟಿದ್ದಾನೆ.  ಈತ ರಾಯಲ್ ಸೊಸೈಟಿಯ ಸದಸ್ಯನಾಗಿದ್ದ.
(ಡಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ